|
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಕೆ.ಬಾಬು ಶೆಟ್ಟಿ ಆಯ್ಕೆ

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಕೆ.ಬಾಬು ಶೆಟ್ಟಿಯವರು
ಆಯ್ಕೆಯಾಗಿದ್ದಾರೆ.
ಬಿಜೆಪಿ ಯುವ ನಾಯಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಇವರು ವಿವಿಧ
ಸಂಘಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ
ಅನುಭವವುಳ್ಳವರಾಗಿದ್ದಾರೆ.
ಈ ಮೂಲಕ ಕೊನೆಗೂ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸ್ಥಾನದ ಗೊಂದಲ
ಬಗೆಹರಿದಂತಾಗಿದೆ. ಇತರ ಎಲ್ಲಾ ಕ್ಷೇತ್ರಗಳಲ್ಲೂ ಅಧ್ಯಕ್ಷರ ಆಯ್ಕೆ ಮುಗಿದು
ತಿಂಗಳುಗಳಾದರೂ ಬೈಂದೂರು ಕ್ಷೇತ್ರದಲ್ಲಿ ಆಯ್ಕೆ ವಿಷಯದಲ್ಲಿ ಉಂಟಾದ
ಅಭಿಪ್ರಾಯ ಭೇದಗಳಿಂದ ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಿತ್ತು. ಬಾಬು ಶೆಟ್ಟಿಯವರ
ಹೆಸರು ಕೇಳಿ ಬರುತ್ತಿದ್ದಾದರೂ ಶಾಸಕರು ಬಾಬು ಶೆಟ್ಟಿಯವರ
ಪರವಾಗಿಯೇ ಶಿಫಾರಸು ಮಾಡಿದ್ದರೂ, ಬಿಜೆಪಿಯೊಳಗಿನ ಆಂತರಿಕ ಸಮಸ್ಯೆಯಿಂದ ಆಯ್ಕೆ
ಘೋಷಣೆ ಆಗಿರಲಿಲ್ಲ.
ಬಾಬು ಶೆಟ್ಟಿಯವರ ಆಯ್ಕೆಗೆ ಬೆಂದೂರು ಕ್ಷೇತ್ರದ ಹಲವಾರು ಸಂಘಸಂಸ್ಥೆಗಳು
ಸಂತಸ ವ್ಯಕ್ತಪಡಿಸಿ, ಅಭಿನಂದನೆ ವ್ಯಕ್ತಪಡಿಸಿದ್ದಾರೆ.
|