|
ನುಡಿ ಬೆಳಕು ಸಮಾರೋಪ

ಧರ್ಮ, ಭಾಷೆ, ಭಾಂದವ್ಯ ಉಳಿಸಲು ಹಿರಿಯರು ಮಾಡಿದ ಹೋರಾಟ ಅಪೂರ್ವವಾದುದು
ಬೇರೆ ಬೇರೆ ಕಾರಣಕ್ಕೆ ವಲಸೆ ಹೋದ ಜನರು ತಮ್ಮ ಈ ಹಿಂದಿನ ನೆಲವನ್ನು
ನೆನೆದು ಪಡುವ ಸಂಕಟ ಅವರಿಗೇ ಗೊತ್ತು. ತಮ್ಮ ಭಾಷೆ, ಭಾಂದವ್ಯ ಉಳಿಸಲು
ನಮ್ಮ ಹಿರಿಯರು ಮಾಡಿದ ಹೋರಾಟ ಅಪೂರ್ವವಾದುದು. ಗೋವಾದಲ್ಲಿ ಪೋರ್ಚುಗೀಸರು
ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ನಮ್ಮ ಸಂಸ್ಕೃತಿಯ ಮೇಲೆ ನಡೆದ ದಬ್ಬಾಳಿಕೆ,
ಬಲಾತ್ಕಾರದ ಮತಾಂತರ, ದ್ವೇಷ ಭಾವನೆಯ ಪೀಡನೆಯಿಂದ ತಪ್ಪಿಸಿಕೊಳ್ಳಲು
ಕರ್ನಾಟಕಕ್ಕೆ ಮುಖ್ಯವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಕೇರಳದ
ಜಿಲ್ಲೆಗಳಿಗೆ ವಲಸೆ ಬಂದವರ ಮಹಾಪಯಣದ ಕಥೆ `ಸ್ವಪ್ನ ಸಾರಸ್ವತ ' ಕಾದಂಬರಿ.
ಇದು ಒಂದು ಸಮಾಜದ ಕಥೆಯಲ್ಲ. ಸಮಸ್ತ ಜನಾಂಗದ ಮಾನವೀಯ ಮೌಲ್ಯಗಳ ಕಥೆ.
ಬದಲಾಗುತ್ತಿರುವ ಮೌಲ್ಯಗಳ ಕಥೆಯೂ ಹೌದು. ಇಲ್ಲಿ ಸಾಕ್ಷಿ ಪ್ರe ಆಗಿರುವ
ನಾಗ್ಡೊ ಬೇತಾಳ `ಮುಂದೆ ಮಾತುಗಳಲ್ಲಿ ಬರುವ ಶಬ್ದಗಳು ಅರ್ಥ
ಕಳೆದುಕೊಳ್ಳುತ್ತವೆ. ಶಾಪಗಳು ತಗಲುವುದಿಲ್ಲ.' ಎಂದ ಮಾತುಗಳು ಇಲ್ಲಿ
ವರ್ತಮಾನದ ಸ್ಥಿತಿಗತಿ ವಿವರಿಸುತ್ತದೆ. ಈ ಸಂದಿಗ್ಧ ಕಾಲದಲ್ಲಿ ಯುವಜನರಿಗೆ
ಜೀವನಮೌಲ್ಯಗಳ ಪರಿಚಯ ಮಾಡಿಕೊಡಬೇಕಾದುದು ಬಹಳ ಅಗತ್ಯ ಎಂದು ಖ್ಯಾತ
ಕಾದಂಬರಿಕಾರ, ಸ್ವಪ್ನ ಸಾರಸ್ವತ ಕಾದಂಬರಿಯ ಮೂಲಕ ಪ್ರಸಿದ್ದರಾದ
ಬಿ.ಗೋಪಾಲಕೃಷ್ಣ ಪೈ ಹೇಳಿದರು.
ಕುಂದಾಪುರದಲ್ಲಿ ಕುಂದಪ್ರಭ ಆಶ್ರಯದಲ್ಲಿ ನಡೆದ ೧೨ ವಾರಗಳ ನುಡಿಬೆಳಕು ಸರಣಿ
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರದ ಉಪವಿಭಾಗಾಧಿಕಾರಿ ಕೆ.ಎನ್.ರಮೇಶ್
ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಪೇಟೆ ಶ್ರೀ ವೆಂಕಟರಮಣ
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ , ಕಾರ್ಪೋರೇಶನ್ ಬ್ಯಾಂಕ್‌ನ
ಉಡುಪಿ ವಲಯ ಕಚೇರಿಯ ಸೀನಿಯರ್ ಮೆನೇಜರ್ ಕೆ. ವೇಣುಗೋಪಾಲ್ ,
ಕಮಲಾಕ್ಷ ಅಮೀನ್ ಬಹರೈನ್ ಉಪಸ್ಥಿತರಿದ್ದರು.
ನುಡಿಬೆಳಕು ಸರಣಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ
ವಿತರಿಸಲಾಯಿತು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ
ಮಾತನಾಡಿದರು.
ಅಂಕಣಗಾರ ಕೋ.ಶಿವಾನಂದ ಕಾರಂತ್ ಹಾಗೂ ಲೇಖಕಿ ಶ್ರೀಮತಿ ಗೀತಾ ಶೆಣೈ ಸ್ವಪ್ನ
ಸಾರಸ್ವತ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕೆ.ವೆಂಕಟೇಶ ಪೈ ಸುಂದರ ಹಸ್ತಾಕ್ಷರದಲ್ಲಿ ನುಡಿಮುತ್ತು ಬರೆದವರಲ್ಲಿ
ಅತ್ಯುತ್ತಮ ೨೦ ಮಂದಿಯ ವಿವರ ನೀಡಿದರು.
ಎ.ಭಾಸ್ಕರ ಹೆಬ್ಬಾರ್, ಎಚ್.ಸೋಮಶೇಖರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಕೋ.ರಮಾನಂದ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ
ನೃತ್ಯನಿಕೇತನ ಕೊಡವೂರು ಅವರಿಂದ `ದಾಸ ವೈಭವ' ಕಾರ್ಯಕ್ರಮ
ನಡೆಯಿತು.
|